Tuesday, October 20, 2015

ಭಾಗ್ಯ

ಕರ್ನಾಟಕದ ಜನತೆಗೆ
ವಿದ್ಯುತ್ ತಂತಿಯಿಂದ ಹೊಸ "ಭಾಗ್ಯ"
ವಿದ್ಯುತ್ ಹರಿಸಲಲ್ಲದಿದ್ದರೂ
ಬಟ್ಟೆ ಒಣಗಿಸಲಂತೂ ಯೋಗ್ಯ

Monday, November 7, 2011

ಕನ್ನಡ ರಾಜ್ಯೋತ್ಸವ

ನಿಜವಾದ ಕನ್ನಡಿಗರಿಗೆ
ನಿತ್ಯೋತ್ಸವ...
ಹುಸಿ ಕನ್ನಡಿಗರಿಗೆ
ನವೆಂಬರೋತ್ಸವ

Saturday, February 5, 2011

ಸಾಹಿತ್ಯ ಪ್ರಕಾರ...

ರಾಜಕೀಯವನ್ನು ಸಾಹಿತ್ಯದಿಂದ
ದೂರವಿಡಲು  ಆಗದು..
ಏಕೆಂದರೆ, ನಾಟಕವೂ
ಸಾಹಿತ್ಯದ  ಪ್ರಕಾರಗಳಲ್ಲೊಂದು

ಸಾಹಿತ್ಯ ಸಮ್ಮೇಳನದಲ್ಲಿ...

ಹೊಟ್ಟೆ ಹಸಿದವರಿಗೆ..
ಅನ್ನವಿದೆ, ಸಾರು ಇಲ್ಲ...
ಹಾಗೆಯೇ...
ಸಾಹಿತ್ಯಕ್ಕೆ  ಹಸಿದವರಿಗೆ..
ಮಾತು ಇದೆ, ಸಾರವಿಲ್ಲ.

Thursday, April 29, 2010

ಕೆಳಗೆ-ಮೇಲೆ

ನನ್ನಾಕೆ ಕೆಳಗೆ
ನಾನು ಮೇಲೆ...
ನಾವಿಬ್ರೂ ಏತ
ಆಡುವ ವೇಳೆ

Saturday, February 14, 2009

ಭಯೋತ್ಪಾದನೆ ಜಾಗೃತಿ

ಭಯೋತ್ಪಾದನೆ ಜಾಗೃತಿ ಆರಂಭವಾಗಬೇಕು
ಮನೆಮನೆಗಳಲ್ಲಿ...
ಹೌದು ಸ್ವಾಮೀ...ಯಾಕೆಂದ್ರೆ...
ನಿಜವಾದ ಭಯೋತ್ಪಾದನೆ ನಡೆಯುವುದೇ ಅಲ್ಲಿ ;)
(ಭಯೋತ್ಪಾದಕರು ಯಾರು ಅಂತ ಬೇರೆ ಬಿಡಿಸಿ ಹೇಳಬೇಕೆ?)

Monday, February 2, 2009

ವೋಲ್ವೋ

ಮಹಾನಗರ ಸಾರಿಗೆ ಸಂಸ್ಥೆಯ
ಹೆಮ್ಮೆಯ ಘೋಷಣೆ:
"ಜನ ಓಡಾಡ್ತಾರೋ ಇಲ್ವೋ...
ನಾವಂತೂ ಓಡಿಸ್ತೀವಿ ವೋಲ್ವೋ"

Tuesday, December 11, 2007

ರಾಷ್ಟ್ರಪತಿ ಆಡಳಿತ

ಇಡೀ ದೇಶದಲ್ಲಿ ಇದ್ದರೂ
ರಾಷ್ಟ್ರಪತಿ ಆಡಳಿತ
ರಾಷ್ಟ್ರಪತಿಯ ಮನೆಯಲ್ಲಿ
ಅವರ ಪತ್ನಿಯದೇ ಆಡಳಿತ

Wednesday, November 21, 2007

ಮಾಂಸಾಹಾರಿ

ಹೆಂಡತಿಯರೆಲ್ಲರೂ ಖಂಡಿತವಾಗಿ
ಮಾಂಸಾಹಾರಿಗಳೇ...
ಪ್ರತಿನಿತ್ಯ ತಿನ್ನುತ್ತಾರಲ್ಲತಂತಮ್ಮ ಗಂಡಂದಿರ ತಲೆ

Friday, November 16, 2007

ಬೆಂಗಳೂರಿನ ಭೂಮಿ

ಭಗವಂತನೆಂದ, "ಭಕ್ತ, ನಿನ್ನ ಭಕ್ತಿಗೆ ಮೆಚ್ಚಿದೆ,
ಬೇಡು ವರ"
ಅದಕ್ಕೆ ಭಕ್ತನ ಉತ್ತರ:
"ನನಗಿನ್ನೇನೂ ಬೇಡ ಸ್ವಾಮಿ
ಕರುಣಿಸಿ ಬೆಂಗಳೂರಿನಲ್ಲೊಂದು ತುಂಡು ಭೂಮಿ"